Chyuthi; ಚ್ಯುತಿ

270.00

Add to Wishlist
Add to Wishlist

Description

ಐದು ಸಾವಿರ ವರ್ಷಗಳ ಹಿಂದಿನ ನಾಗರಿಕತೆಯ ವಸ್ತುವಾಗುಳ್ಳ ಕಾದಂಬರಿ ಬರೆಯುವಾಗ ಅದರ ವಿವರಗಳಿಗೆ ಚ್ಯುತಿ ಬರದ ಹಾಗೆ ಬರೆಯುವುದು ಸುಲಭವಲ್ಲ. ಲೇಖಕರ ಕಲ್ಪನೆ ಸಹಿತ ಆಧಾರಗಳೂ ಅಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಅವೆಲ್ಲವನ್ನೂ ನಿಭಾಯಿಸಿ ಆ ಕಾಲಘಟ್ಟದ ಚಿತ್ರಣ ಕಟ್ಟಿಕೊಟ್ಟಿರುವ ಈ ಕಾದಂಬರಿ ಮೊದಲ ಕೃತಿ ಅನಿಸುವುದಿಲ್ಲ ಎಂಬುದೇ ಇದರ ಹೆಚ್ಚುಗಾರಿಕೆ. ಭಾಷೆ ಮತ್ತು ವಸ್ತುವಿನ ಹದವನ್ನು ಬಳಸಿಕೊಂಡು ಗಟ್ಟಿ ಕಟ್ಟಡದ ವಿನ್ಯಾಸದಲ್ಲಿ ನಿಲ್ಲುವ ಕಾದಂಬರಿ ಚ್ಯುತಿ.

 

ಶಶಾಂಕ್ ಪರಾಶರ್ ಅವರ ಚೊಚ್ಚಲ ಕಾದಂಬರಿ ‘ಚ್ಯುತಿ’ ಸಿಂಧು-ಸರಸ್ವತೀನದಿಗಳ ಸಂಸ್ಕೃತಿಯ ನೆರಳನ್ನು ತನ್ನ ತುದಿಬೆರಳಿನಲ್ಲಿ ಹಿಡಿದು ಹವಣುಗೊಂಡ ವಿಶಿಷ್ಟ ಕೃತಿ. ಇದು ಆ ಕಾಲದಲ್ಲಿ ಕೂಡ ಮಾನವ ಸ್ವಭಾವ ಎಂದಿನಂತೆಯೇ ಇತ್ತೆಂಬುದನ್ನು ಅಕ್ಕರೆಯ ಗೆಳೆಯನ ಮೆಲುದನಿಯ ಮಾತಿನ ಧಾಟಿಯಲ್ಲಿ ನಮಗೆ ಆಪ್ತವಾಗಿ ನಿವೇದಿಸುವ ರಚನೆಯಾಗಿ ಆಸಕ್ತರನ್ನು ಕಾಡುತ್ತದೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಇಂಥ ಮಹತ್ತ್ವಾಕಾಂಕ್ಷೆಗೆ ಮನಸ್ಸು ಮಾಡಿದ ಶಶಾಂಕ್ ನಮ್ಮ ಓದುಗರಿಗೆ ಹೊಸ ಭರವಸೆಯಾಗಬಲ್ಲರು.

chyuthi ಚ್ಯುತಿ

 

Reviews

There are no reviews yet.

Only logged in customers who have purchased this product may leave a review.